Connect with us


      
ದೇಶ

ಹಿಜಾಬ್ ವಿವಾದ: “ಮಹಿಳೆಯರು ತಮ್ಮ ಇಷ್ಟದ ಬಟ್ಟೆಗಳನ್ನು ಧರಿಸುವ ಹಕ್ಕು ಹೊಂದಿದ್ದಾರೆ” ಪ್ರಿಯಾಂಕ ಗಾಂಧಿ

Iranna Anchatageri

Published

on

ಹೊಸದಿಲ್ಲಿ: ಫೆಬ್ರವರಿ 09 (ಯು.ಎನ್.ಐ.) ಇದೀಗ ಪ್ರಿಯಾಂಕಾ ಗಾಂಧಿ ಕೂಡ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸಂವಿಧಾನದಿಂದ ಪಡೆದಿರುವ ತಮ್ಮ ಇಚ್ಛೆಯ ಪ್ರಕಾರ ಮಹಿಳೆಯರಿಗೆ ಬಟ್ಟೆ ಧರಿಸುವ ಹಕ್ಕಿದೆ ಎಂದು ಬರೆದಿದ್ದಾರೆ. ಟ್ವೀಟ್‌ನ ಕೊನೆಯಲ್ಲಿ ಪ್ರಿಯಾಂಕಾ ತಮ್ಮ ಅಭಿಯಾನದ ಹ್ಯಾಶ್‌ಟ್ಯಾಗ್ ‘ಐ ಕ್ಯಾನ್ ಫೈಟ್’ ಅನ್ನು ಸಹ ಹಾಕಿದ್ದಾರೆ.

ಪ್ರಿಯಾಂಕಾ ಗಾಂಧಿ ಸೋಷಿಯಲ್ ಮೀಡಿಯಾದಲ್ಲಿ ‘ಅದು ಬಿಕಿನಿಯಾಗಿರಲಿ, ಗೂಂಗಟ್, ಜೀನ್ಸ್ ಅಥವಾ ಹಿಜಾಬ್ ಆಗಿರಲಿ. ಏನು ಧರಿಸಬೇಕೆಂದು ಮಹಿಳೆ ನಿರ್ಧರಿಸಬೇಕು. ಈ ಹಕ್ಕನ್ನು ಅವರಿಗೆ ಭಾರತದ ಸಂವಿಧಾನ ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ಯದ ಉಡುಪಿ, ಶಿವಮೊಗ್ಗ, ಬಾಗಲಕೋಟೆ ಮತ್ತು ಕರ್ನಾಟಕದ ಇತರ ಭಾಗಗಳ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮಂಗಳವಾರ ಹಿಜಾಬ್ ಅನ್ನು ಬೆಂಬಲಿಸಿ ಮತ್ತು ವಿರೋಧಿಸಿ ಪ್ರತಿಭಟನೆಗಳ ನಂತರ ಉದ್ವಿಗ್ನತೆ ಹೆಚ್ಚಾಯಿತು. ನಂತರ ಪೊಲೀಸರು ಮತ್ತು ಆಡಳಿತ ಮಧ್ಯಪ್ರವೇಶಿಸಬೇಕಾಯಿತು. ಶಿವಮೊಗ್ಗದಲ್ಲಿ ಕಲ್ಲು ತೂರಾಟ ನಡೆದ ಬಳಿಕ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಯುಪಿ ಚುನಾವಣೆಯಲ್ಲಿ ಹಿಜಾಬ್ ವಿವಾದ ಪ್ರತಿಧ್ವನಿ
ಕರ್ನಾಟಕದ ಹಿಜಾಬ್ ವಿವಾದ ಯುಪಿಯ ಚುನಾವಣಾ ರಾಜಕೀಯಕ್ಕೂ ಪ್ರವೇಶಿಸಿದೆ. ಈ ವಿಚಾರದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿ ಮುಖಾಮುಖಿಯಾಗಿದೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಮುಂಬೈನಲ್ಲೂ ಪ್ರತಿಭಟನೆಗಳು ಆರಂಭವಾಗಿವೆ. ಮುಂಬೈನಲ್ಲಿ ಸಮಾಜವಾದಿ ಪಕ್ಷವು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಸಹಿ ಅಭಿಯಾನವನ್ನು ನಡೆಸುತ್ತಿದೆ.

Share