Published
4 months agoon
By
UNI Kannadaಇತ್ತೀಚೆಗೆ, ಕಳೆದ 20 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಂಗ್ಲಾದೇಶದ ಮಹಿಳೆಯ ಬಗ್ಗೆ ತಿಳಿದು ಜನರು ಆಶ್ಚರ್ಯಚಕಿತರಾಗಿದ್ದಾರೆ.ಈಕೆಯನ್ನು ತಪಾಸಣೆ ಮಾಡಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ.
55 ವರ್ಷದ ಬಚೇನಾ ಖಾತುನ್ ಎಂಬ ಬಾಂಗ್ಲಾದೇಶದ ಮಹಿಳೆ ಈ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಬಚೇನಾ ಕಳೆದ 20 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. 2002 ರಲ್ಲಿ ಬಾಂಗ್ಲಾದೇಶದ ಚೌಡಂಗಾದಲ್ಲಿ ಪಿತ್ತಕೋಶದ ಕಲ್ಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.ಈ ಮಹಿಳೆ ತನ್ನ ಜೀವನದ ಸಂಪಾದನೆಯನ್ನು ಪೂರ್ತಿಯಾಗಿ ತನ್ನ ಆಪರೇಷನ್ಗಾಗಿ ಹಾಕಿದ್ದಳು. ಆದರೆ ಆಸ್ಪತ್ರೆಯಿಂದ ಹೊರಬಂದ ಎರಡು ದಿನಗಳ ನಂತರ ಆಕೆಗೆ ಹೊಟ್ಟೆ ನೋವು ಪ್ರಾರಂಭವಾಯಿತು. ಮತ್ತೆ ಆಸ್ಪತ್ರೆಯಲ್ಲಿ ತೋರಿಸಿದಾಗ, ವೈದ್ಯರು ಗಮನ ಕೊಡಬೇಡಿ ಇದು ಸಹಜ ಎಂದಿದ್ದಾರೆ.
20 ವರ್ಷಗಳಿಂದ ಹೊಟ್ಟೆ ನೋವು:
ಹೀಗೆ ಆಕೆ ಸತತ 20 ವರ್ಷ ಹೊಟ್ಟೆ ನೋವನ್ನು ಅನುಭವಿಸಿದ್ದಾಳೆ.20 ವರ್ಷಗಳ ಬಳಿಕ ಅದು ತೀವ್ರವಾದಾಗ ಇನ್ನೇನು ತಡೆಯಲು ಸಾಧ್ಯವೇ ಇಲ್ಲ ಎಂದನಿಸಿದಾಗ ಬಚೇನಾ, ಮತ್ತೆ ಬೇರೆ ಬೇರೆ ವೈದ್ಯರನ್ನು ಸಂಪರ್ಕಿಸಿದ್ದಾಳೆ. ಹೆಚ್ಚಿನ ವೈದ್ಯರು ಅವರಿಗೆ ಔಷಧಿಗಳನ್ನು ನೀಡುತ್ತಲೇ ಇದ್ದರೆ ಅನೇಕರಿಗೆ ನೋವಿನ ಕಾರಣವೇ ತಿಳಿದಿರಲಿಲ್ಲ.
ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಬಚೇನ ಸಾಕಿದ ಹಸು, ಆಸ್ತಿಪಾಸ್ತಿ ಇತ್ಯಾದಿಗಳನ್ನೆಲ್ಲ ಮಾರಬೇಕಾಯಿತು.ಏಕೆಂದರೆ ಪಾಪ ಬಚೇನಾಳಿಗೆ ಚಿಕಿತ್ಸೆಗೆ ಹಣ ಸಿಗುತ್ತಿರಲಿಲ್ಲ. 20 ವರ್ಷಗಳಿಂದ ಈ ನೋವಿನಲ್ಲೇ ಬದುಕುತ್ತಿದ್ದರೂ ಚಿಕಿತ್ಸೆ ಸಿಕ್ಕಿಲ್ಲ. ನಂತರ ಅವಳು ಒಂದು ವೈದ್ಯರ ಬಳಿಗೆ ಹೋದಾ್, ಅವರು ಎಕ್ಸ್-ರೇ ಮಾಡುವಂತೆ ಸೂಚಿಸಿದ್ದಾರೆ.
ಆಘಾತಕಾರಿ ಎಕ್ಸರೇ..
ಹೊಟ್ಟೆಯ ಎಕ್ಸರೆಯಲ್ಲಿ ಕಂಡದ್ದು ಬಹಳ ಆಶ್ಚರ್ಯಕರವಾಗಿತ್ತು. ಬಚೇನಾ ಎಕ್ಸ್-ರೇ ಕಳೆದ 20 ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿದ್ದ ಕಬ್ಬಿಣದ ಕತ್ತರಿಯನ್ನು ತೋರಿಸಿದೆ. ಇದನ್ನು ನೋಡಿದ ವೈದ್ಯರಿಗೂ ಬುದ್ಧಿ ಭ್ರಮಣೆಯಾಯಿತು. 20 ವರ್ಷಗಳ ಹಿಂದೆ ತನ್ನ ಆಪರೇಷನ್ ಬಗ್ಗೆ ವೈದ್ಯರಿಗೆ ಹೇಳಿದಾಗ ಅದು ವೈದ್ಯರ ನಿರ್ಲಕ್ಷ್ಯದ ಪರಿಣಾಮ ಎಂದು ಅರ್ಥವಾಯಿತು. ಕಳೆದ ಸೋಮವಾರ ಆಪರೇಷನ್ ಮಾಡಿ ದೇಹದಿಂದ ಕತ್ತರಿ ತೆಗೆಯಲಾಗಿತ್ತು. ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಇದೀಗ ಅದೇ ಆಸ್ಪತ್ರೆಯಲ್ಲಿ ಮೂವರ ಸಮಿತಿ ರಚನೆಯಾಗಿದ್ದು, ಈ ರೀತಿಯ ನಿರ್ಲಕ್ಷ್ಯ ಹೇಗೆ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ.