Connect with us


      
ಕರ್ನಾಟಕ

ಕಾರ್ಯನಿರತ ಪತ್ರಕರ್ತರ ಸಂಘ; ಪ್ರತಿಜ್ಞಾ ವಿಧಿ ಸ್ವೀಕಾರ

Kumara Raitha

Published

on

ಬೆಂಗಳೂರು: ಏಪ್ರಿಲ್‌ ೧೯ (ಯು.ಎನ್.‌ಐ.) ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಸಾಲಿನ ರಾಜ್ಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ದಿನಾಂಕ 21.04.2022 ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ನಯನ ಸಭಾಂಗಣ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ.ರಸ್ತೆ, ಬೆಂಗಳೂರು. ಇಲ್ಲಿ ನಡೆಯಲಿದೆ.

ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ.

27.2.2022 ರಂದು ರಾಜ್ಯ ಸಂಘ ಮತ್ತು ಎಲ್ಲಾ ಜಿಲ್ಲಾ ಸಂಘಗಳಿಗೆ ಚುನಾವಣೆ ನಡೆದಿತ್ತು. ಕೆಯುಡಬ್ಲ್ಯೂಜೆ ಚುನಾವಣೆ ಬಗ್ಗೆ ತಕರಾರು ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್ 11.04.2022 ರಂದು ಅರ್ಜಿಯನ್ನು ವಜಾ ಮಾಡಿತ್ತು. ಬಳಿಕ ರಾಜ್ಯ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಚುನಾವಣಾ ಆಯ್ಕೆ ದೃಢೀಕರಣ ಪತ್ರಗಳನ್ನು ನೂತನ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿಗಳು ನೀಡಿದ್ದರು. ಈಗ ಎಲ್ಲಾ ಜಿಲ್ಲಾ ಮತ್ತು ರಾಜ್ಯ ಸಂಘದ ಪ್ರತಿಜ್ಞೆ ಸ್ವೀಕಾರ ಸಮಾರಂಭ ಬೆಂಗಳೂರಿನಲ್ಲಿ ಒಟ್ಟಿಗೆ ನಡೆಯುತ್ತಿದೆ.

Share