Connect with us


      
ಕ್ರೀಡೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ : ಸಿಂಧು ಸೇರಿದಂತೆ 25 ಭಾರತೀಯ ಆಟಗಾರರು ಭಾಗಿ

Iranna Anchatageri

Published

on

ಹುಯೆಲ್ವಾ/ಸ್ಪೇನ್, ಡಿಸೆಂಬರ್ 12 (ಯು.ಎನ್.ಐ) ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಇಂದು ಹುಯೆಲ್ವಾದಲ್ಲಿರುವ ಕ್ಯಾರೊಲಿನಾ ಮರಿನ್ ಸ್ಪೋರ್ಟ್ಸ್ ಪ್ಯಾಲೇಸ್‌ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಪಿವಿ ಸಿಂಧು ನಾಯಕತ್ವದಲ್ಲಿ ಭಾರತದ 25 ಆಟಗಾರ್ತಿಯರು ಭಾಗವಹಿಸುತ್ತಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಿಂಧು ಹಾಲಿ ಚಾಂಪಿಯನ್‌ ಕೂಡ ಆಗಿದ್ದು, 2019 ರಲ್ಲಿ ಬಾಸೆಲ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ನಂತರ ಅವರು ಭಾರತದ ಮೊದಲ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. 26ರ ಹರೆಯದ ಅವರು ಈ  ಚಾಂಪಿಯನ್‌ಶಿಪ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚು ಗೆದ್ದುಕೊಂಡಿದ್ದರು. ಈ ಸ್ಫರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸಿಂಧು ಗರಿಷ್ಠ 6 ಪದಕಗಳನ್ನು ಗೆದ್ದಕೊಳ್ಳಲಿರುವ ಮೊದಲ ಮಹಿಳಾ ಆಟಗಾರ್ತಿಯಾಗುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪಿ.ವಿ.ಸಿಂಧು ಹಾಗೂ ಚೀನಾದ ಜೆಂಗ್ ನಿಂಗ್ 5-5 ಪದಕಗಳನ್ನು ಹೊಂದಿರುವ ಗರಿಮೆ ಇದೆ.

ಈ ಮಧ್ಯೆ, 3 ಬಾರಿಯ ಚಾಂಪಿಯನ್ ಮತ್ತು ಸ್ಥಳೀಯ ಆಟಗಾರ್ತಿ ಕೆರೊಲಿನಾ ಮರಿನ್ ಹಾಗೂ 2017 ರ ವಿಜೇತ ನೊಜೊಮಿ ಒಕುಹರಾ ಅವರು ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ, ಭಾರತದ ಸೈನಾ ನೆಹ್ವಾಲ್ ಗಾಯದ ಸಮಸ್ಯೆಯಿಂದ ಮೊದಲ ಬಾರಿಗೆ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯತ್ತಿದ್ದಾರೆ. ಈ ಟೂರ್ನಾಮೆಂಟ್ ನಲ್ಲಿ ಪಿ.ವಿ.ಸಿಂಧು ಮೊದಲ ಸುತ್ತಿನಲ್ಲಿ ಬೈ ಪಡೆದುಕೊಂಡಿದ್ದು, ಎರಡನೇ ಸುತ್ತಿನಲ್ಲಿ ಮಾರ್ಟಿನಾ ರೆಪಿಸ್ಕಾ ಅವರನ್ನು ಎದುರಿಸಲಿದ್ದಾರೆ.

ಕಂಚಿನ ಪದಕ ವಿಜೇತ ಪ್ರಣೀತ್ ನೆದರ್ಲೆಂಡ್ ವಿರುದ್ಧ ಹೋರಾಟ
ಪುರುಷರ ಸಿಂಗಲ್ಸ್‌ನಲ್ಲಿ 12ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಅವರ ಮೊದಲ ಪಂದ್ಯದಲ್ಲಿ ಸ್ಪೇನ್‌ನ ಪಾಬ್ಲೊ ಅಬಿಯಾನ್ ಮತ್ತು ಕಂಚಿನ ಪದಕ ವಿಜೇತ ಬಿ ಸಾಯಿ ಪ್ರಣೀತ್, ನೆದರ್ಲೆಂಡ್ಸ್‌ನ ಮಾರ್ಕ್ ಕೆಲ್ಜೊ ವಿರುದ್ಧ ಸೆಣಸಲಿದ್ದಾರೆ. ಮಾಜಿ ನಂ.10 ಆಟಗಾರ ಎಚ್‌ಎಸ್ ಪ್ರಣಯ್ ಅವರು ಲಾಂಗ್ ಆಂಗಸ್ ವಿರುದ್ಧ ಸೆಣಸಲಿದ್ದಾರೆ. ಭಾರತದ 11 ಜೋಡಿಗಳು ಡಬಲ್ಸ್ ನಲ್ಲಿ ಭಾಗವಹಿಸುತ್ತಿವೆ. 50 ದೇಶಗಳ ಒಟ್ಟು 337 ಆಟಗಾರರು ಈ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

Share