Connect with us


      




ಹಣಕಾಸು

ಜಗತ್ತಿನ ಮೊಟ್ಟ ಮೊದಲ ” ಬಿಟ್‌ ಕಾಯಿನ್‌ ಸಿಟಿ” ನಿರ್ಮಾಣ, ಎಲ್ಲೆಂದರೆ !

Kumara Raitha

Published

on

ಸಾನ್ ಸಾಲ್ವಡಾರ್, ನ  21 (ಯುಎನ್‌ ಐ)  ಸದ್ಯದಲ್ಲಿಯೇ ವಿಶ್ವದ   ಮೊದಲ    ‘ಬಿಟ್‌ ಕಾಯಿನ್ ನಗರ’ ನಿರ್ಮಾಣ  ಆರಂಭ ಗೊಳ್ಳಲಿದೆ.    ಇದಕ್ಕಾಗಿ  ನಿರ್ವಾಹಕರು     ಬಿಟ್‌ ಕಾಯಿನ್ ಬಾಂಡ್‌ಗಳ  ಮೂಲಕ  ನಿಧಿ  ಸಂಗ್ರಹಿಸಲಿದ್ದಾರೆ.     ಈಗಾಗಲೇ    ಹಲವು ದೇಶ ಗಳು   ಬಿಟ್ ಕಾಯಿನ್ ಅನ್ನು  ಕಾನೂನುಬದ್ಧಗೊಳಿಸಲು ಕ್ರಮಗಳನ್ನು  ಕೈಗೊಳ್ಳುತ್ತಿವೆ.   ಈ ದೇಶ     ಮಾತ್ರ   ನೇರವಾಗಿ   ” ಬಿಟ್ ಕಾಯಿನ್ ನಗರ”  ನಿರ್ಮಿಸಲು ಮುಂದಾಗಿರುವುದಕ್ಕೆ    ಜಗತ್ತಿನ ಮಾರುಕಟ್ಟೆ ತಜ್ಞರು  ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯ  ಅಮೆರಿಕಾ  ದೇಶವಾಗಿರುವ      ಎಲ್‌  ಸಾಲ್ವಡಾರ್‌      ಕ್ರಿಪ್ಟೋಕರೆನ್ಸಿ ,  ಬಿಟ್‌ಕಾಯಿನ್ ಅನ್ನು   ಕಾನೂನು  ಬದ್ಧಗೊಳಿಸಿದ   ಜಗತ್ತಿನ  ಮೊದಲ ದೇಶವಾಗಿದೆ.    ಬಿಟ್‌ಕಾಯಿನ್  ವಿಷಯದಲ್ಲಿ      ಈ ದೇಶ     ಮತ್ತೊಂದು  ಹೆಜ್ಜೆ ಇಟ್ಟಿದೆ.   ವಿಶ್ವದ  ಮೊದಲ ‘ಬಿಟ್‌ಕಾಯಿನ್ ಸಿಟಿ’ ನಿರ್ಮಿಸಲು  ಯೋಜಿಸಿದೆ.   ಇದಕ್ಕಾಗಿ    ಬಿಟ್‌ಕಾಯಿನ್  ಬಾಂಡ್‌ಗಳ  ಮೂಲಕ ನಿಧಿ ಸಂಗ್ರಹಿಸಲಾಗುವುದು   ಎಂದು    ಎಲ್  ಸಾಲ್ವಡಾರ್ ಅಧ್ಯಕ್ಷ   ನಯಾಬ್‌   ಬುಕೆಲೆ  ಹೇಳಿದ್ದಾರೆ.
ಎಲ್  ಸಾಲ್ವಡಾರ್‌ನಲ್ಲಿ   ಬಿಟ್‌ಕಾಯಿನ್   ಪ್ರೋತ್ಸಾಹಿಸುವ    ದಿಶೆಯಲ್ಲಿ   ಅಧ್ಯಕ್ಷ  ನಯಾಬ್‌  ಬುಕೆಲೆ   ಪ್ರಚಾರ   ನಡೆಸುತ್ತಿದ್ದಾರೆ.     ಆ  ಜಾಗೃತಿ  ಅಭಿಯಾನ  ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳುವ   ಸಂದರ್ಭದಲ್ಲಿ  ಸಭೆಯೊಂದನ್ನು  ಉದ್ದೇಶಿಸಿ ಮಾತನಾಡಿದ  ಅವರು . ”   ಬಿಟ್‌ಕಾಯಿನ್‌ಗಳಿಗಾಗಿ  ಅಗ್ನಿ ಪರ್ವತದಿಂದ   ಇಂಧನ  ಪೂರೈಸುತ್ತಿದ್ದೇವೆ.    ಶೀಘ್ರದಲ್ಲೇ   ಈ  ಪ್ರದೇಶದಲ್ಲಿ ಬಿಟ್‌ಕಾಯಿನ್ ನಗರ  ಸ್ಥಾಪಿಸುತ್ತೇವೆ” ಎಂದು ಅವರು ಘೋಷಿಸಿದ್ದಾರೆ.   ನಗರದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹೊರತು ಪಡಿಸಿ ಯಾವುದೇ ತೆರಿಗೆಯನ್ನು   ಸರ್ಕಾರ ವಿಧಿಸುವುದಿಲ್ಲ,   2022 ರಲ್ಲಿ ಬಿಟ್‌ಕಾಯಿನ್ ನಗರಕ್ಕೆ  ನಿಧಿ ಸಂಗ್ರಹ   ಆರಂಭಿಸಲಿದ್ದೇವೆ.  2022 ರಲ್ಲಿ  ಬಾಂಡ್‌ಗಳು ಲಭ್ಯವಾಗಲಿವೆ ಎಂದು ಅವರು ಹೇಳಿದ್ದಾರೆ.

ಬಕೆಲೆ   ಜೊತೆಗೆ,   ಬ್ಲ್ಯಾಕ್‌ಚೈನ್ ತಂತ್ರಜ್ಞಾನ ಪೂರೈಕೆದಾರ   ಬ್ಲ್ಯಾಕ್‌ ಸ್ಟ್ರೀಮ್‌ನ  ಮುಖ್ಯ ಕಾರ್ಯತಂತ್ರ ಅಧಿಕಾರಿ  ಸ್ಯಾಮ್ಸನ್ ಮೋವ್,  ಮುಂದಿನ ವರ್ಷದ ಆರಂಭದಲ್ಲಿ  ಎಲ್ ಸಾಲ್ವಡಾರ್  ದೇಶದಲ್ಲಿ  “ಬಿಟ್‌ ಕಾಯಿನ್ ಸಿಟಿ”     ಸ್ಥಾಪಿಸಲು    ಬಿಟ್‌ಕಾಯಿನ್‌ನ  ಬೆಂಬಲದೊಂದಿಗೆ  1 ಬಿಲಿಯನ್  ಡಾಲರ್‌   ಬಾಂಡ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.

Share