Connect with us


      




ಸಾಹಿತ್ಯ

ಲೇಖಕ ಪೂರ್ಣಚಂದ್ರ ತೇಜಸ್ವಿ ಪತ್ನಿ ವಿಧಿವಶ

Vanitha Jain

Published

on

ಬೆಂಗಳೂರು, ಡಿಸೆಂಬರ್ 14(ಯು.ಎನ್.ಐ) ದಿವಂಗತ ಕವಿ, ಲೇಖಕ, ವಿಮರ್ಶಕ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ಶ್ರೀಮತಿ ರಾಜೇಶ್ವರಿ ತೇಜಸ್ವಿ . ಹೃದಯಾಘಾತದಿಂದ ಜಯನಗರ ರಾಜಲಕ್ಷ್ಮೀ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಂಗಳೂರಿನ ಎಚ್‍ಎಸ್‍ಆರ್ ಲೇ ಔಟ್‍ನಲ್ಲಿನ ಮಗಳ ಮನೆಯಲ್ಲೇ ಇದ್ದ ರಾಜೇಶ್ವರಿ ತೇಜಸ್ವಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮಗಳು ಸುಶ್ಮಿತಾ ನಿವಾಸಕ್ಕೆ ಪಾರ್ಥಿವ ಶರೀರ ರವಾನೆಯಾಗಲಿದ್ದು, ಸಂಜೆ 5.30ರವರೆಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಜೇಶ್ವರಿ ತೇಜಸ್ವಿ ದೇಹವನ್ನು ಆಸ್ಪತ್ರೆಗೆ ದಾನ ಮಾಡಲು ನಿರ್ಧರಿಸಿರುವುದರಿಂದ ಅಂತ್ಯಕ್ರಿಯೆ ನಡೆಸಲಾಗುವುದಿಲ್ಲ.

ಬೆಂಗಳೂರಿನಲ್ಲಿ 1937ರಲ್ಲಿ ಜನಿಸಿದ ಅವರು ತತ್ವಶಾಸ್ತ್ರ ಆನರ್ಸ್, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪೂರ್ಣಗೊಳಿಸಿದ್ದಾರೆ. 1996ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿರಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು ನನ್ನ ತೇಜಸ್ವಿ ಎಂಬ ಮೊದಲ ಪುಸ್ತಕ ಹೊರತಂದರು. ಇನ್ನು ಸಾಕಷ್ಟು ಕೃತಿಗಳನ್ನು ಬರೆದಿದ್ದಾರೆ.

Share