Connect with us


      
ಕರ್ನಾಟಕ

“ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ ರೈತರ ನೆರವಿಗೆ ನಿಲ್ಲಿ” – ಯಡಿಯೂರಪ್ಪ

Iranna Anchatageri

Published

on

ಸಾಂದರ್ಭಿಕ ಚಿತ್ರ

ಬೆಳಗಾವಿ (ಸುವರ್ಣ ವಿಧಾನಸೌಧ) ಡಿಸೆಂಬರ್ 15, (ಯು.ಎನ್.ಐ.) ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ಬದಿಗೊತ್ತಿ ರೈತರ ನೆರವಿಗೆ ಧಾವಿಸಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬೆಳೆ ನಷ್ಟ ಪರಿಹಾರ ಕುರಿತು ವಿಧಾನಸಭೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಬರುವ ಹಣಕ್ಕಾಗಿ ನಿರೀಕ್ಷಿಸದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಮಾಡಿದ ರೈತರಿಗೆ ಹಣ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ಎರಡು ತಿಂಗಳುಗಳಿಂದ ರೈತರಿಗೆ ಹಣ ಸಿಕ್ಕಿಲ್ಲ ಎಂದರೆ ಅವರು ಹೇಗೇ ಜೀವನ ಮಾಡುವುದು ಎಂದು ಪ್ರಶ್ನಿಸಿದ ಬಿಎಸ್‌ವೈ, ಮುಂದಿನ ಕೃಷಿ ಕಾಯಕಕ್ಕೆ ರೈತರ ಬಳಿ ಬಿತ್ತನೆ ಬೀಜಕ್ಕೂ ಹಣ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೇಂದ್ರ ಹಣಕ್ಕಾಗಿ ದಾರಿ ನೋಡದೆ ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ ಕೂಲಿ ಕಾರ್ಮಿಕರ ರಕ್ಷಣೆಗೆ ಧಾವಿಸಿ. ಕೇಂದ್ರ ಸರ್ಕಾರದಿಂದ ಹಣ ಬಂದೇ ಬರುತ್ತದೆ. ಆದರೆ, ಸದ್ಯ ರೈತರ ಕಷ್ಟಗಳಿಗೆ ಆದ್ಯತೆ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಸೂಚಿಸಿದರು.

Share