Connect with us


      




ದೇಶ

ಐಸೋಲೇಟ್ ಮಂದಿಗೆ ಯೋಗ ತರಬೇತಿ ಪ್ರಾರಂಭಿಸಿದ ದೆಹಲಿ ಸರ್ಕಾರ

Vanitha Jain

Published

on

ನವದೆಹಲಿ: ಜನೆವರಿ 11 (ಯು.ಎನ್.ಐ) ಕೋವಿಡ್ ಸೋಂಕಿನಿಂದಾಗಿ ಮನೆಯಲ್ಲಿ ಐಸೋಲೇಟ್ ಆಗಿರುವ ಮಂದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಆನ್‍ಲೈನ್ ಯೋಗ ತರಗತಿಗಳನ್ನು ಜಾರಿಗೆ ತಂದಿದೆ.

ದೆಹಲಿ ಕೀ ಯೋಗಶಾಲಾ ಅಡಿಯಲ್ಲಿ ಯೋಗ ತರಗತಿಗಳನ್ನು ನಡೆಸಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ.

ಕೋವಿಡ್ ರೋಗಿಗಳು ಆನ್‍ಲೈನ್ ಮೂಲಕ ಯೋಗಕ್ಕೆ ಸಂಬಂಧಿಸಿದ ಆಸನಗಳನ್ನು ಮತ್ತು ಪ್ರಾಣಾಯಾಮವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಮಾಡಬಹುದು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

“ಯೋಗವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾವು ಐಸೋಲೇಶನ್ ಆಗಿರುವವರಿಗೆ ಅದ್ಭುತವಾದ ಕಾರ್ಯಕ್ರಮವನ್ನು ತಂದಿದ್ದೇವೆ. ಎಲ್ಲಾ ಕೋವಿಡ್ ರೋಗಿಗಳ ಚೇತರಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡು ದೆಹಲಿ ಸರ್ಕಾರವು ‘ದೆಹಲಿ ಕಿ ಯೋಗಶಾಲಾ’ ಅಡಿಯಲ್ಲಿ ಯೋಗ ತರಗತಿಗಳನ್ನು ಪ್ರಾರಂಭಿಸುತ್ತಿದೆ ಎಂದಿದ್ದಾರೆ.

ಆನ್‍ಲೈನ್ ತರಗತಿಗಳು ಬುಧವಾರದಿಂದ ಪ್ರಾರಂಭವಾಗಲಿದ್ದು, ಯೋಗ ಪರಿಣಿತರು ಪ್ರತಿದನಿ ಬೆಳಿಗ್ಗೆ ಮತ್ತು ಸಂಜೆ ಯೋಗ ತರಗತಿಗಳನ್ನು ನಡೆಸಲಿದ್ದಾರೆ. ಐಸೋಲೇಟ್ ಆದ ಮಂದಿಗೆ ಯೋಗ ತರಬೇತಿಯ ಲಿಂಕ್ ಕಳುಹಿಸುತ್ತೇವೆ. ಬುಧವಾರದಿಂದ ವಿವಿಧ ಬ್ಯಾಚ್‍ಗಳಲ್ಲಿ ತರಗತಿಗಳು ತಡೆಯಲಿವೆ ಎಂದು ಮಾಹಿತಿ ನೀಡಿದರು.

ದೆಹಲಿಯಲ್ಲಿ ಕೊರೋನಾ ಮಹಾಸ್ಫೋಟ ಸಂಭವಿಸಿದ್ದು, ದಿನಕ್ಕೆ 20 ಸಾವಿರ ಗಡಿ ದಾಟುತ್ತಿವೆ. ಈಗಾಗಲೇ ಇಲ್ಲಿ ರಾತ್ರಿ ಕಫ್ರ್ಯೂ ಜಾರಿ ಮಾಡಲಾಗಿದೆ. ದೆಹಲಿಯಲ್ಲಿ ಪರೀಕ್ಷೆಗೆ ಒಳಪಡುವ ಪ್ರತಿ ನಾಲ್ಕನೇ ವ್ಯಕ್ತಿ ಕೋವಿಡ್ ಪಾಸಿಟಿವ್ ಆಗಿ ಹೊರಹೊಮ್ಮುತ್ತಿದ್ದಾರೆ ಎಂಬುದೇ ಆಘಾತಕಾರಿ ವಿಚಾರ.

ಈಗಾಗಲೇ ರೆಸ್ಟೋರೆಂಟ್, ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಇನ್ನು ಖಾಸಗಿ ಕಚೇರಿಗಳನ್ನು ಮುಚ್ಚುವಂತೆ ಆದೇಶಿದ ದೆಹಲಿ ಸರ್ಕಾರ ವರ್ಕ್ ಫ್ರಂ ನೀಡುವಂತೆ ಸೂಚಿಸಿದೆ.

Share