Published
5 months agoon
ಬೆಂಗಳೂರು, ಡಿ 8 (ಯುಎನ್ಐ) ರಿಹ್ಯಾಬಿಲೇಷನ್ ಸೆಂಟರ್ ನಲ್ಲಿ ಯುವನೊಬ್ಬ ಶಂಕಾಸ್ಪದ ಸಾವಿಗೀಡಾಗಿದ್ದಾರೆ. ಮೃತ ಯುವಕನನ್ನು 24 ವರ್ಷದ ಸುಭಾಷ್ ಪಾಂಡಿ ಎಂದು ಗುರುತಿಸಲಾಗಿದೆ.
ತಕ್ಷಣ ರಿಹ್ಯಾಬಿಲೇಷನ್ ಸೆಂಟರ್ ನ ಸಿಬ್ಬಂದಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗನಿಗೆ ಏನೋ ಆಗಿದೆ ಅಂತ ತಿಳಿಸಿದ್ದಾರೆ. ಸ್ಥಳಕ್ಕೆ ಹೋದಾಗ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸುಭಾಷ್ ಮೃತ ದೇಹ ಪತ್ತೆಯಾಗಿದೆ. ಸದ್ಯ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸ್ತಿರೋ ಪೋಷಕರು, ರಿಹ್ಯಾಬಿಲೇಷನ್ ಸೆಂಟರ್ ನಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಬಂಡೆಪಾಳ್ಯ ಠಾಣೆಗೆ ದೂರು ನೀಡಿರುವ ಪೋಷಕರು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.