Published
5 months agoon
ಬೆಂಗಳೂರು: ಡಿಸೆಂಬರ್ 08 (ಯು.ಎನ್.ಐ.) ವಿಧಾನ ಪರಿಷತ್ ಚುನಾವಣೆಯ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂಸೂಫ್ ಷರೀಫ್ 115 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿ ಬೃಹತ್ ಹಗರಣ ಮಾಡಿದ್ದಾರೆ ಎಂದು ಬೆಂಗಳೂರು ನಗರ ದಕ್ಷಿಣ ಜಿಲ್ಲಾಧ್ಯಕ್ಷ ಎನ್ ಆರ್ ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿರುವ ಅವರು, ಈ ಸಂಬಂಧ ಸರ್ಕಾರಿ ಸ್ವತ್ತು ಕಬಳಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಬೇಕೆಂದು ಎಸಿಬಿ ಮತ್ತು ಬಿಎಂಟಿಎಫ್ ನಲ್ಲಿ ದೂರು ದಾಖಲು ಮಾಡಲಾಗಿದೆ ಎಂದರು. 4 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, 4 ಮಂದಿ ಹಿರಿಯ ತಹಸೀಲ್ದಾರ್ ಗಳು ಮತ್ತು ಯೂಸುಫ್ ಷರೀಫ್ ಸೇರಿದಂತೆ ಹಲವರ ವಿರುದ್ಧ ಎಸಿಬಿ ಮತ್ತು ಬಿಎಂಟಿಎಫ್ ನಲ್ಲಿ ದೂರು ದಾಖಲು ಮಾಡಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ಶ್ರೀನಿವಾಸಪುರ ಗ್ರಾಮದ ಸರ್ವೆ ನಂ: 15 ರ ಒಟ್ಟು 11.01 ಎಕರೆ ವಿಸ್ತೀರ್ಣದ 115 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತು ಒಟ್ಟು 11.01 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತಿನ ಪೈಕಿ ಪಶ್ಚಿಮ ಭಾಗದ 07.20 ಎಕರೆ ಪ್ರದೇಶದ ಸರ್ಕಾರಿ ಸ್ವತ್ತನ್ನು ಸಾರ್ವಜನಿಕ ಮಾರಾಟದ ಹರಾಜು ಪ್ರಕ್ರಿಯೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ. ಉಳಿದ 01.01 ಎಕರೆ ಸರ್ಕಾರಿ ಸ್ವತ್ತನ್ನು ಅಕ್ರಮವಾಗಿ ಕಬಳಿಸಿ ಕೆಜಿಎಫ್ ಬಾಬು ಬೇಲಿ ಹಾಕಿದ್ದಾರೆ
115 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಬೃಹತ್ ಭೂ ಹಗರಣವನ್ನು ಸಿಐಡಿ ತನಿಖೆಗೆ ವಹಿಸಬೇಕು.
ಐಎಎಸ್ ಅಧಿಕಾರಿಗಳಾದ ಎಂ.ಎ. ಸಾದಿಕ್, ಎಂ.ಕೆ. ಅಯ್ಯಪ್ಪ, ಡಾ. ಜಿ.ಸಿ. ಪ್ರಕಾಶ್ ಹಾಗೂ ವಿ. ಶಂಕರ್, ಕೆಎಎಸ್ ಅಧಿಕಾರಿಗಳಾದ ರಂಗನಾಥಯ್ಯ, ಬಿ. ವೆಂಕಟೇಶ್, ಬಾಳಪ್ಪ ಹಂದಿಗುಂದ, ಬಿ.ಆರ್. ಮಂಜುನಾಥ್ ಸೇರಿದಂತೆ 2012, 2014-15, 2015-16 ಮತ್ತು 2018 ರಲ್ಲಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸಪುರ ಗ್ರಾಮದ ಆರ್.ಐ. ಗಳು ಮತ್ತು ಗ್ರಾಮ ಲೆಕ್ಕಿಗರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ, ಸರ್ಕಾರಿ ಸ್ವತ್ತು ಕಬಳಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಬೇಕೆಂದು ಎಸಿಬಿ ಮತ್ತು ಬಿಎಂಟಿಎಫ್ ಗೆ ದೂರು ನೀಡಲಾಗಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಸಿಎಂಗೆ ಕೂಡಾ ಮನವಿ ಮಾಡಿದ್ದೇನೆ ಎಂದು ರಮೇಶ್ ತಿಳಿಸಿದರು.